ಧ್ವನಿಗಾಗಿ  ಚಿಕ್ಕ ವೋಕಲ್ ಬೂತ್ ಮತ್ತು ವಾದ್ಯಗಳ ಧ್ವನಿಮುದ್ರಣಕ್ಕಾಗಿ ದೊಡ್ಡ ಬೂತ್‌ನೊಂದಿಗೆ, ನಾವು ಕ್ಯೂಬೇಸ್ ಅಡ್ವಾನ್ಸ್ಡ್ ಮ್ಯೂಸಿಕ್ ಪ್ರೊಡಕ್ಷನ್ ಸಿಸ್ಟಮ್‌ನಲ್ಲಿ ಡಿಜಿಟಲ್ ರೆಕಾರ್ಡಿಂಗ್ ಅನ್ನು ನೀಡುತ್ತೇವೆ. ರೆಕಾರ್ಡಿಂಗ್ ಗಳಿಗೆ ನಮ್ಮ ಅತ್ಯುತ್ತಮ ಎಂಜಿನಿಯರಿಂಗ್ ಬೆಂಬಲ ಸದಾ ಇರುತ್ತದೆ.

ಆಡಿಯೊ ರೆಕಾರ್ಡಿಂಗ್
 
 
ಮಿಕ್ಸಿಂಗ್: ಕೋಟ್ ಗಾಗಿ ಕರೆ ಮಾಡಿ

ನಾವು ಎಲ್ಲಾ ರೀತಿಯ ಸಂಗೀತ ಪ್ರಕಾರಗಳಿಗೆ ಮಿಕ್ಸಿಂಗ್ ಸೇವೆಯನ್ನು ಒದಗಿಸುತ್ತೇವೆ. ಸಂಗೀತಕ್ಕೆ ಕಿವಿಗೊಡುವ ನಮ್ಮ ಎಂಜಿನಿಯರ್‌ಗಳು ವಿಭಿನ್ನ ಪ್ರಕಾರಗಳು ಮತ್ತು ಸಂಗೀತದ ಪ್ರಾಜೆಕ್ಟ್ ಗಳಲ್ಲಿ ಕಾರ್ಯ ಪರಿಣತಿ ಹೊಂದಿದ್ದಾರೆ

 
ಸಂಗೀತ ಸಂಯೋಜನೆ: ಕೋಟ್ ಗಾಗಿ ಕರೆ ಮಾಡಿ

ಕಮರ್ಷಿಯಲ್ ಜಿಂಗಲ್ ಆಗಿರಲಿ ಅಥವಾ ಚಲನಚಿತ್ರಕ್ಕಾಗಿ ಸೌಂಡ್ ಟ್ರ್ಯಾಕ್ ಆಗಿರಲಿ, ನಮ್ಮ ಸಂಗೀತಗಾರರ ತಂಡವು ಸ್ಕೋರ್ ಮಾಡಲು ಸಿದ್ಧವಾಗಿದೆ. ನಾವು ಅನುಭವಿ ಸಂಯೋಜಕರು ಮತ್ತು ವಿಶ್ವ ದರ್ಜೆಯ ಸಂಗೀತಗಾರರೊಂದಿಗೆ ಸಹಯೋಗವನ್ನು ಹೊಂದಿದ್ದೇವೆ.

 
ವಾಯ್ಸ್ ಓವರ್‌ಗಳು

2005 ರಿಂದ, ವಿವಿಧ ಧ್ವನಿ ಕಲಾವಿದರೊಂದಿಗಿನ ನಮ್ಮ ಸಹಯೋಗವು ವ್ಯವಹಾರ ಮತ್ತು ಗುಣಮಟ್ಟದ ವಿಷಯದಲ್ಲಿ ಬಹಳ ಲಾಭದಾಯಕವಾಗಿದೆ. ಇ ಲರ್ನಿಂಗ್, ಆಡ್ ಜಿಂಗಲ್ಸ್, ನಿರೂಪಣೆಗಳು, ಡಾಕ್ಯುಮೆಂಟರಿ ನಿರೂಪಣೆಗಳು, ಐ ವಿ ಆರ್, ಕಥಾವಾಚನ, ಕಾರ್ಪೊರೇಟ್ ನಿರೂಪಣೆಗಳು ಮತ್ತು ಇನ್ನಿತರ ರೀತಿಯ ಧ್ವನಿ ಸೇವೆಗಳನ್ನು ನಾವು ಒದಗಿಸುತ್ತೇವೆ.

 
ವೀಡಿಯೊ

ಉತ್ತಮ  ಸಿನಿಮಾಟೋಗ್ರಾಫರ್‌ಗಳು, ಮತ್ತು ತಂತ್ರಜ್ಞರ ತಂಡದೊಂದಿಗೆ, ನಾವು ಜಾಹೀರಾತು ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ಸಂಗೀತ ವೀಡಿಯೊಗಳು, ಮೇಕಿಂಗ್ ವೀಡಿಯೊಗಳು ಮತ್ತು ಕಿರುಚಿತ್ರಗಳಿಗಾಗಿ ವೀಡಿಯೊ ಉತ್ಪಾದನಾ ಸೇವೆಯನ್ನು ನೀಡುತ್ತೇವೆ.